ಪ್ರಭಾ ಅತ್ರೆ (ಜನನ ೧೩ ಸೆಪ್ಟೆಂಬರ್ ೧೯೩೨-ಮರಣ : ೧೩, ಜನವರಿ, ೨೦೨೪) ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತದ ಶ್ರೇಷ್ಟ ಗಾಯಿಕೆಯರಲ್ಲಿ ಒಬ್ಬರು. ಪೂನಾದಲ್ಲಿ ಜನಿಸಿದ ಇವರು ಹೀರಾಬಾಯಿ ಬಡೋದೆಕರ ರವರ ಶಿಷ್ಯೆ.ಸಂಗೀತದಲ್ಲಿ ಹಲವಾರು ಸಂಶೋಧನೆಗಳನ್ನು ಮಾಡಿರುವ ಇವರು ಸಂಗೀತದ ಓರ್ವ ಶ್ರೇಷ್ಟ ಶಿಕ್ಷಕರು. == ಪ್ರಶಸ್ತಿಗಳು == ೧೯೯೦ ರಲ್ಲಿ ಪದ್ಮಶ್ರೀ ೧೯೯೧ ರಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಗಳಲ್ಲದೆ ೨೦೦೨ ರಲ್ಲಿ ಪದ್ಮಭೂಷಣ ಕಾಳಿದಾಸ್ ಸಮ್ಮಾನ್, ದೀನನಾಥ ಮಂಗೇಶ್ಕರ್ ಮುಂತಾದ ಹಲವಾರು ಪ್ರಶಸ್ಥಿಗಳಿಂದ ಸನ್ಮಾನಿಸಲ್ಪಟ್ಟಿದ್ದಾರೆ. == ನಿಧನ == ಪ್ರಭಾ ಅತ್ರೆಯವರು ತಮ್ಮ ೯೨ ನೆಯ ವಯಸ್ಸಿನಲ್ಲಿ ಪುಣೆಯಲ್ಲಿ ೧೩, ಜನವರಿ, ೨೦೨೪ ರಂದು ನಿಧನರಾದರು. == ಉಲ್ಲೇಖಗಳು ==